+91 9563214523 info#@gmail.com

ನಾಗ್ಪುರ: ವಿದರ್ಭ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮುಂಬೈ ವಿರುದ್ದ ಭರ್ಜರಿ ಪ್ರದರ್ಶನ ನೀಡಿ ಇನ್ನಿಂಗ್ಸ್ ಹಾಗೂ 20ರನ್ ಗಳಿಂದ ಪಂದ್ಯ ಗೆದ್ದು, ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಕರ್ನಾಟಕ ಗಳಿಸಿದ್ದ 570ರನ್ ಗಳ ಬೃಹತ್ ಮೊತ್ತದ ಎದುರು ಮುಂಬೈ ತಂಡ ತನ್ನ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 173 ರನ್ ಹಾಗೂ 377ರನ್ ಗಳಿಸಿ ಔಟಾಗಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಮುಂಬೈ ಪರ ಸೂರ್ಯ ಕುಮಾರ್ ಯಾದವ್ 108ರನ್ (16 ಬೌಂಡರಿ, 1 ಸಿಕ್ಸರ್), ಆಕಾಶ್ ಪಾರ್ಕರ್ 65, ಶಿವಮ್ ದುಬೇ 71ರನ್ ಗಳಿಸಿ ಇನ್ನಿಂಗ್ಸ್ ಸೋಲು ತಪ್ಪಿಸಲು ಯತ್ನಿಸಿದರು.
ಕರ್ನಾಟಕ ಪರ ಕೆ.ಗೌತಮ್ 6, ವಿನಯ್ ಕುಮಾರ್ 2 ಅರವಿಂದ್ ಶ್ರೀನಾಥ್ 1 ವಿಕೆಟ್ ಗಳಿಸಿದರು. ಇದಕ್ಕೂ ಮುನ್ನ ಕರ್ನಾಟಕ ಪರ ಶ್ರೇಯಸ್ ಗೋಪಾಲ್ ಅಜೇಯ 150(11 ಬೌಂಡರಿ), ಕೆ.ಅಬ್ಬಾಸ್ 50, ಮಾಯಾಂಕ್ ಅಗರವಾಲ್ 78, ಆರ್ ಸಮರ್ಥ್ 40ರನ್ ಗಳಿಸಿ 570 ಸ್ಕೋರ್ ಮಾಡಿ ಆಲೌಟ್ ಆಗಿತ್ತು.

www.000webhost.com