+91 9563214523 info#@gmail.com

ಗಳೂರು: ನಗರದ ಹೊರ ವಲಯದ ರೈಲು ನಿಲ್ದಾಣಗಳಲ್ಲಿನ ದ್ವಿಚಕ್ರ ವಾಹನ ನಿಲುಗಡೆ ಶುಲ್ಕವನ್ನು ಇಲಾಖೆ ಏರಿಕೆ ಮಾಡಿದ್ದು, ಮೂರು ವರ್ಷಗಳ ಕಾಲ ಇದೇ ಶುಲ್ಕ ಜಾರಿಯಲ್ಲಿರುತ್ತದೆ.
ಹಿಂದೆ ನಗರದಾದ್ಯಂತ ಏಕ ರೂಪದ ಶುಲ್ಕ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ನಗರ, ಬೆಂಗಳೂರೇತರ ರೈಲು ನಿಲ್ದಾಣಗಳು ಎಂದು ವಿಭಾಗಿಸಿ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ. ವಾಹನ ನಿಲುಗಡೆಗೆ ದಿನವೊಂದಕ್ಕೆ ಗರಿಷ್ಠ 20 ರು. ದರ ನಿಗದಿ ಮಾಡಲಾಗಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ 50ರು.ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿನಿತ್ಯ ವಾಹನ ನಿಲುಗಡೆ ಮಾಡುವ ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಕೆಂಗೇರಿ, ವೈಟ್ ಫೀಲ್ಡ್ ನಂತಹ ಬಿಬಿಎಂಪಿ ವ್ಯಾಪ್ತಿಗೆ ಒಳಪಡದ ನಿಲ್ದಾಣಗಳಲ್ಲಿ ಶುಲ್ಕ ಹೆಚ್ಚಳವಾಗಿದೆ. ‘ಇನ್ನು ಮೂರು ವರ್ಷ ಗಳ ತನಕ ಇದೇ ಶುಲ್ಕ ಜಾರಿಯಲ್ಲಿರುತ್ತದೆ ಎಂದು ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್.ಎಸ್. ಶ್ರೀಧರಮೂರ್ತಿ ಹೇಳಿದ್ದಾರೆ.
ಪಾರ್ಕಿಂಗ್ ಶುಲ್ಕದ ವಿವರ
* ಪ್ರತಿ 2 ಗಂಟೆಗಳಿಗೆ ರು. 10
* 2 ರಿಂದ 4 ಗಂಟೆಗಳ ತನಕ 20 ರು.
* 4 ರಿಂದ 10 ಗಂಟೆಗಳ ತನಕ 30 ರು.
* 10 ರಿಂದ 16 ಗಂಟೆಗಳ ತನಕ 40 ರು.
* 16 ರಿಂದ 24 ಗಂಟೆಗಳ ತನಕ 50 ರು.

www.000webhost.com