+91 9563214523 info#@gmail.com

ರಾಷ್ಟ್ರೀಯ ವಾರ್ತಾ ವಾಹಿನಿ ರಿಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಯಾವ ಪಕ್ಷಕ್ಕೂ ಅಧಿಕಾರ ಸಿಗದೇ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೇಳಿದೆ. ಅಲ್ಲದೇ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದೆ.
ರಿಪಬ್ಲಿಕ್ ಪ್ರಕಾರ ಬಿಜೆಪಿ 102-108 ಸ್ಥಾನಗಳಿಸಿ ಅತೀ ದೊಡ್ಡ ಪಕ್ಷ. 72-74 ಸೀಟು ಗಳಿಸುವ ಮೂಲಕ ಆಡಳಿತ ಪಕ್ಷ ಎರಡನೇ ಸ್ಥಾನಕ್ಕೆ ಜಾರಲಿದ್ದು, 42-44 ಸ್ಥಾನಗಳನ್ನು ಪಡೆಯುವ ಮೂಲಕ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇತರರು 2-4 ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಲಿದ್ದಾರೆ.
ಇನ್ನು ಮತ ಗಳಿಕೆಯಲ್ಲಿ, ಬಿಜೆಪಿ ಶೇ. 40 ರಷ್ಟು ಮತ ಪಡೆದುಕೊಳ್ಳಲಿದ್ದು, ಕಾಂಗ್ರೆಸ್ ಶೇ. 38 ರಷ್ಟು ಮತ ಬಾಚಿಕೊಂಡರೆ, ಜೆಡಿಎಸ್ ಶೇ. 30 ರಷ್ಟು ಮತ ಪಡೆದರೆ ಇತರರು ಶೇ. 2 ರಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

www.000webhost.com