+91 9563214523 info#@gmail.com

ದೆಹಲಿ: ತನ್ನ ಸ್ವಂತ ಬಲದಿಂದಲೇ ಚುನಾವಣೆ ಜಯಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದ್ದು ಯಾವುದೇ ಮೈತ್ರಿ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಜೆಡಿಎಸ್‌ ವರಿಷ್ಠ ದೇವೇಗೌಡರ ಕುರಿತು ಪ್ರಧಾನಿಯ ಮೆಚ್ಚುಗೆಯ ಮಾತುಗಳಿಂದ ತಾವೇನೂ ಚಿಂತಿತರಾಗಿಲ್ಲ ಎಂದ ಸಿದ್ಧರಾಮಯ್ಯ, ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಹಾಗು ಪ್ರಧಾನಿ ಮೋದಿ ಯಾವುದೇ ಕೊಡುಗೆ ನೀಡಿಲ್ಲ ಎಂದಿದ್ದಾರೆ.
“ಭೀಕರ ಬರಗಾಲವಿದ್ದಾಗಲೂ ಪ್ರಧಾನಿ ರಾಜ್ಯಕ್ಕೆ ಯಾವುದೇ ನೆರವು ನೀಡಿಲ್ಲ. ಭಾರತ ಸರಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಪ್ರಧಾನಿ ಬಳಿಕ ಬಹು ಪಕ್ಷಗಳ ನಿಯೋಗ ಕಳುಹಿಸಿದ್ದರೂ ಅವರು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆ?ಮಹದಾಯಿ ನೀರಿನ ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಂಡಿಲ್ಲ” ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಎರಡು ಕ್ಷೇತ್ರಗಳಲ್ಲಿ ಸ್ಫರ್ಧಿಸುತ್ತಿರುವ ಕುರಿತಾಗಿ ಮಾತನಾಡಿದ ಸಿದ್ಧರಾಮಯ್ಯ, “ಬಾದಾಮಿಯಲ್ಲಿ ನಾನು ಸ್ಫರ್ಧಿಸಬೇಕೆಂದು ಉತ್ತರ ಕರ್ನಾಟಕದ ಜನತೆ ಬಯಸಿದ್ದರು. ಚಾಮುಂಡೇಶ್ವರಿ ಅಲ್ಲದೇ ಮಿಕ್ಕ ಕ್ಷೇತ್ರಗಳಿಗೂ ಈ ಮೂಲಕ ಸರಕಾರಾತ್ಮಕ ಸಂದೇಶ ನೀಡುವುದು ನಮ್ಮ ಉದ್ದೇಶವಾಗಿದೆ. ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲಿದ್ದೇನೆ ಎಂಬುದು ಶೇ 100 ರಷ್ಟು ಖಚಿತ” ಎಂದು ಹೇಳಿದ್ದಾರೆ.

www.000webhost.com